ಅಝ್-ಝಿಲ್ಝಾಲ್

zilzaal

ಅತ್ಯಂತ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ! (ನಾನು ಆರಂಭಿಸುವೆ)!

ಭೂಮಿಯು [ಅತ್ಯಂತ ತೀವ್ರತೆಯೊಂದಿಗೆ] ಗಡಗಡ ನಡುಗುವಾಗ; ತನ್ನೊಳಗಿನ ಎಲ್ಲ ಭಾರವನ್ನು ಅದು ಹೊರಚೆಲ್ಲಿ ಬಿಡುವಾಗ; ಅದೇನಾಗಿದೆ ಇದಕ್ಕೆ ಎಂದು ಮನುಷ್ಯನು [ಭಯಾಶ್ಚರ್ಯಗಳೊಂದಿಗೆ] ಕೇಳುವನು! {1-3}

ಆ ದಿನ ಭೂಮಿಯು ತನ್ನ [ಮೇಲೆ ನಡೆದಂತಹ ಎಲ್ಲ ಘಟನೆಗಳ] ಸಮಾಚಾರವನ್ನು ಸ್ವತಃ ವಿವರಿಸುವುದು. ಏಕೆಂದರೆ, ಅದಕ್ಕೆ ನಿಮ್ಮ ಒಡೆಯನು (ಹಾಗೆಯೇ ಮಾಡಲು) ಆಜ್ಞಾಪಿಸಿರುವನು. {4-5}

ಕರ್ಮಗಳನ್ನು (ಅವರವರಿಗೆ) ತೋರಿಸಲ್ಪಡುವ ಆ ದಿನ (ಅದನ್ನು ನೋಡಲು) ಜನರು ಪ್ರತ್ಯೇಕ ಗುಂಪುಗಳಲ್ಲಿ ಹೊರಬರುವರು. ಅಣುವಿನ ತೂಕದಷ್ಟಾದರೂ ಒಳಿತನ್ನು ಮಾಡಿದವನು (ಅಂದು) ಅದನ್ನು ಕಂಡೇ ತೀರುವನು, ಮತ್ತು ಅಣುವಿನ ತೂಕದಷ್ಟಾದರೂ ಕೆಡುಕನ್ನು ಮಾಡಿದವನೂ ಸಹ (ಅಂದು) ಅದನ್ನು ಕಂಡೇ ತೀರುವನು. {6-8}

Advertisements

One thought on “ಅಝ್-ಝಿಲ್ಝಾಲ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s