ಅತ್-ತಕ್ವೀರ್

081at_takweer

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಸೂರ್ಯನು ಹೊದಿಸಲ್ಪಡುವಾಗ; ನಕ್ಷತ್ರಗಳು ನಿಸ್ತೇಜಗೊಳಿಸಲ್ಪಡುವಾಗ; ಪರ್ವತಗಳು (ತನ್ನ ಬುಡದಿಂದ) ಸರಿಸಲ್ಪಡುವಾಗ; ತುಂಬು ಗರ್ಭಿಣಿ ಒಂಟೆಗಳನ್ನು (ನಿರ್ಲಕ್ಷಿಸಿ) ಅದರ ಪಾಡಿಗೆ ಬಿಟ್ಟುಬಿಡಲಾದಾಗ; ವನ್ಯ ಜೀವಿಗಳನ್ನು ಒಟ್ಟುಸೇರಿಸಲಾದಾಗ; ಸಮುದ್ರಗಳು ಉಕ್ಕಿಹರಿಯಲ್ಪಡುವಾಗ; ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಿ ಬಿಡುವಾಗ; ಯಾವ ಪಾಪಕ್ಕಾಗಿ ಕೊಲ್ಲಲ್ಪಟ್ಟೆ ಎಂದು ಜೀವಂತ ಹೂಳಲ್ಪಟ್ಟ ಹೆಣ್ಣುಮಗುವಿನೊಂದಿಗೆ ಕೇಳಲಾದಾಗ; (ಮನುಷ್ಯನು ಮಾಡಿದ ಒಳಿತು-ಕೆಡುಕುಗಳ) ಕರ್ಮಪತ್ರಗಳನ್ನು ತೆರೆಯಲಾದಾಗ; ಆಕಾಶದ ಕವಚವನ್ನು ಕಳಚಿ ಬಿಡಲಾದಾಗ; ನರಕಾಗ್ನಿಯನ್ನು ಭುಗಿಲೆಬ್ಬಿಸಲಾದಾಗ; ಸ್ವರ್ಗೋದ್ಯಾನವನ್ನು ಸಮೀಪ ತಂದಾಗ, ಪ್ರತಿಯೊಬ್ಬನೂ ತಾನು ಏನನ್ನು (ಭೂಲೋಕದಿಂದ ಸಂಪಾದಿಸಿ) ತಂದಿರುವೆನು ಎಂಬುದನ್ನು ತಿಳಿದು ಕೊಳ್ಳುವನು. [1-14]

ಹಾಗಲ್ಲ! ಹಿಂದಕ್ಕೆ ಸರಿದುಕೊಳ್ಳುವ; ರಭಸದಿಂದ ಮುನ್ನುಗ್ಗುವ ಮತ್ತು ಅವಿತುಕೊಳ್ಳುವ (ನಕ್ಷತ್ರಗಳು) ಸಾಕ್ಷಿ! ರಾತ್ರಿಯು ನಿರ್ಗಮನಗೊಳ್ಳುವ ಹಾಗೂ ಹಗಲು (ಉದಯಿಸಿ) ಉಸಿರಾಡ ತೊಡಗುವ ಸಮಯವು ಸಾಕ್ಷಿ! ವಾಸ್ತವದಲ್ಲಿ ಈ ‘ಕುರ್‍ಆನ್’ ಆದರಣೀಯ ದೂತ (ಜಿಬ್ರೀಲ್) ತಂದಿರುವ ವಚನವೇ ಆಗಿದೆ. ಬಲಶಾಲಿಯಾದ (ಜಿಬ್ರೀಲ್ ಗೆ) ವಿಶ್ವದ ಅಧಿಕಾರ ಗದ್ದುಗೆಯನ್ನು ಹೊಂದಿರುವ (ಅಲ್ಲಾಹ್ ನ) ಬಳಿ ಉನ್ನತ ಸ್ಥಾನಮಾನವಿದೆ. ಅಲ್ಲಿ (ಮಲಕ್ ಗಳು) ಅವರ ಆಜ್ಞಾನುಸರಣೆ ಮಾಡುತ್ತಾರೆ ಮತ್ತು ಅವರು (ತನ್ನ ದೌತ್ಯದ ನಿರ್ವಹಣೆಯಲ್ಲಿ) ಪ್ರಾಮಾಣಿಕರಾಗಿದ್ದಾರೆ. [15-21]

(ಮಕ್ಕಃ ಪಟ್ಟಣದ ನಿವಾಸಿಗಳೇ / ಕುರೈಶ್ ಜನಾಂಗದವರೇ!) ನಿಮ್ಮ ಈ ಒಡನಾಡಿಯು (ಅರ್ಥಾತ್: ಪ್ರವಾದಿ ಮುಹಮ್ಮದ್) ಬುದ್ಧಿಭ್ರಾಂತಿಯಾದವರಲ್ಲ. (ಜಿಬ್ರೀಲ್ ನ ನಿಜರೂಪವನ್ನು) ಅವರು ಸ್ಪಷ್ಟ ದಿಗಂತದಲ್ಲಿ ಚೆನ್ನಾಗಿ ನೋಡಿದ್ದಾರೆ. ಅದೃಷ್ಯ (ಲೋಕದಿಂದ ತನ್ನೆಡೆಗೆ ಬಂದ) ಜ್ಞಾನವನ್ನು ಅವರು (ಯಥಾವತ್ತಾಗಿ) ನಿಮಗೆ ತಲುಪಿಸಿ ಕೊಡುವ ಕಾರ್ಯದಲ್ಲಿ ಜಿಪುಣತೆ ತೋರುವವರಲ್ಲ. ಮತ್ತು (ಮುಹಮ್ಮದ್ ರು ನಿಮಗೆ ಓದಿ ಕೇಳಿಸುತ್ತಿರುವ) ಈ ‘ಕುರ್‍ಆನ್’, ತಿರಸ್ಕರಿಸಲ್ಪಟ್ಟಿರುವ ಶೈತಾನ್ ನ ಮಾತೂ ಅಲ್ಲ — ಹೀಗಿರುವಾಗ, (ಕುರೈಶರೇ) ನೀವು ಅದೆಲ್ಲಿ ಅಲೆಯುತ್ತಿದ್ದೀರಿ? ಇದಾದರೋ ಜಗತ್ತಿನಲ್ಲಿ ವಾಸಿಸುವ ಸಕಲ ಮಾನವರಿಗೆ (ಅಲ್ಲಾಹ್, ಪರಲೋಕ ಮುಂತಾದ ಅದೃಷ್ಯ ವಿಷಯಗಳ ಬಗ್ಗೆ) ಜ್ಞಾಪಿಸಿ ಕೊಡುವ ಒಂದು ಉದ್ಭೋದನೆ ಮಾತ್ರವಾಗಿದೆ. ನಿಮ್ಮ ಪೈಕಿ ಯಾರು ನೇರವಾದ ಮಾರ್ಗವನ್ನು ಅನುಸರಿಸ ಬಯಸುತ್ತಾರೋ (ಅಂಥವರು ಈ ‘ಕುರ್‍ಆನ್’ ನಿಂದ ಮಾರ್ಗದರ್ಶನ ಪಡೆಯಲಿ), ಆದರೆ ಮನುಕುಲದ ಪ್ರಭು/ಪರಿಪಾಲಕನಾದ ಅಲ್ಲಾಹ್ ನು ಬಯಸದೇ ಕೇವಲ ನೀವು ಬಯಸಿದ ಮಾತ್ರಕ್ಕೆ ಏನೂ ಸಂಭವಿಸದು! [22-29]

Advertisements

One thought on “ಅತ್-ತಕ್ವೀರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s