ಅನ್-ನಸ್ರ್

ಸೂರಃ ಅನ್-ನಸ್ರ್ | ಪವಿತ್ರ್ ಕುರ್‍ಆನ್ ನ 110 ನೆಯ ಸೂರಃ | ಇದರಲ್ಲಿ ಒಟ್ಟು 3 ಆಯತ್ ಗಳು ಇವೆ | ( ಅರಬಿ: سورة النصر )

110 | ಸೂರಃ ಅನ್-ನಸ್ರ್ | ಆಯತ್ ಗಳು 3
110 | ಸೂರಃ ಅನ್-ನಸ್ರ್ | ಆಯತ್ ಗಳು 3

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಅತ್ಯಧಿಕ ದಯೆ ತೋರುವವನೂ ಶಾಶ್ವತವಾದ ಕರುಣೆಯುಳ್ಳವನೂ ಆಗಿರುವನು!

(ಓ ಪೈಗಂಬರರೇ,) ಮುಂದೆ, ಅಲ್ಲಾಹ್ ನ ನೆರವು ಬಂದು ಬಿಟ್ಟಾಗ, ಮತ್ತು [ಮಕ್ಕಃ ಪಟ್ಟಣದ ಮೇಲೆ ನಿಮಗೆ] ವಿಜಯ ಪ್ರಾಪ್ತವಾದಾಗ (ಅಲ್ಲಿಯ) ಜನರು ಸಮೂಹ ಸಮೂಹವಾಗಿ ಅಲ್ಲಾಹ್ ನ ‘ದೀನ್’ ಗೆ [ಅರ್ಥಾತ್: ಇಸ್ಲಾಮ್ ಧರ್ಮಕ್ಕೆ] ಬಂದು ಸೇರಿಕೊಳ್ಳುವುದನ್ನು ನೀವು (ಕಣ್ಣಾರೆ) ಕಂಡುಕೊಳ್ಳುವ ಸಂದರ್ಭ ಬಂದಾಗ, ಕೀರ್ತನೆ ಮಾಡುವುದರೊಂದಿಗೆ ನೀವು ನಿಮ್ಮೊಡೆಯ (ಅಲ್ಲಾಹ್) ನ ಪಾವಿತ್ರ್ಯವನ್ನು ಜಪಿಸಿರಿ; ಜೊತೆಗೆ ಅವನೊಡನೆ ಕ್ಷಮೆಯಾಚಿಸುತ್ತಲಿರಿ! ಅವನಾದರೋ ನಿರಂತರವಾಗಿ ಕನಿಕರಿಸುವವನಾಗಿರುವನು. {1-3}

Advertisements

2 thoughts on “ಅನ್-ನಸ್ರ್

  1. ನಿಜವಾದ ಸೃಷ್ಟಿಕರ್ತನಾದ ಅಲ್ಲಾಹ್ ನೊಬ್ಬನ ಹೊರತು ಇತರ ಯಾರನ್ನೂ ಅರಾಧಿಸ ಬೇಡಿರಿ ಎಂದು ನಿರಂತರವಾಗಿ ಮಕ್ಕಃ ಪಟ್ಟಣದ ನಿವಾಸಿಗಳಾದ ಅರಬರಿಗೆ ಮುಹಮ್ಮದ್ ಪೈಗಂಬರರು ಬೋಧಿಸಿದ್ದರು. ಅದರ ಪರಿಣಾಮವಾಗಿ ಅರಬರು ಅವರ ವಿರುದ್ಧ ಪರಮಾವಧಿ ಹಿಂಸಾಚಾರಕ್ಕಿಳಿದಿದ್ದರು. ಕೊನೆಗೆ ತಮ್ಮವರಿಂದ ಬೇಸತ್ತು ದೂರದ ಮದೀನಾ ಪಟ್ಟಣಕ್ಕೆ ವಲಸೆ ಹೋಗುವ ಸಿದ್ಧತೆಗಳನ್ನು ಮುಹಮ್ಮದ್ ಪೈಗಂಬರರು ನಡೆಸುತ್ತಿದ್ದಾಗ ಅಲ್ಲಾಹ್ ನು ಕುರ್‍ಆನ್ ನ ಈ ಅಧ್ಯಾಯವನ್ನು ಇಳಿಸಿಕೊಟ್ಟನು. ಇದರಲ್ಲಿ ಭರವಸೆ ಇದೆ; ದುಃಖಿತ ಮನಸ್ಸಿಗೆ ಸಮಾಧಾನದ ಸಂದೇಶವಿದೆ; ನೋವಿನ ಉಪಶಮನವಿದೆ. ಸೋಜಿಗದ ಸಂಗತಿಯೆಂದರೆ ಮುಂದೆ – ಕೇವಲ ಎಂಟು ವರುಷಗಳಲ್ಲಿ – ಇದರಲ್ಲಿ ನೀಡಲಾದ ಆಶ್ವಾಸನೆಯಯೆಲ್ಲವೂ ಅಕ್ಷರಶಃ ನಿಜವಾಯಿತು, ಅಲ್ಲಾಹ್ ನ ಸಹಾಯ ಪ್ರಾಪ್ತವಾಯಿತು. ಮುಹಮ್ಮದ್ ಪೈಗಂಬರರು ಮಕ್ಕಃ ಪಟ್ಟಣದ ಮೇಲೆ ಯಾವುದೇ ಬಲಪ್ರಯೋಗವಿಲ್ಲದೆ ವಿಜಯ ಸಾಧಿಸಿದ್ದರು, ಎಂದಿಗೂ ಅಳಿಯದ ಇತಿಹಾಸ ನಿರ್ಮಿಸಿದ್ದರು!

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s