ಅಲ್-ಅ’ಲಾ

alaalaa

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

(ಓ ಪೈಗಂಬರರೇ), ಮಹೋನ್ನತನಾದ ನಿಮ್ಮ ಸಂರಕ್ಷಕನ/ಪ್ರಭುವಿನ ನಾಮದ ಪಾವಿತ್ರ್ಯವನ್ನು ಜಪಿಸಿರಿ. (ಸಕಲವನ್ನೂ) ಸೃಷ್ಟಿಸಿ ನಂತರ ಸರ್ವತ್ರ ಸಮ/ಸಂತುಲಿತಗೊಳಿಸಿದವನು ಆ ಪ್ರಭುವೇ. (ನಂತರ) ಪ್ರತಿಯೊಂದರ ವಿಧಿವಿಧಾನ ನಿಗದಿ ಪಡಿಸಿ [ಮುಂದೆ ಸಾಗುವ] ದಾರಿಯನ್ನು ತೋರಿಸಿರುವನು. ಅವನೇ ಹುಲ್ಲು-ಸಸ್ಯಾದಿಗಳನ್ನು ಬೆಳೆಸಿ ನಂತರ [ಇನ್ನೊಂದು ಘಟ್ಟದಲ್ಲಿ] ಅವುಗಳನ್ನು ಒಣಗಿ ಕರ್ರಗಾದ ಕಸ-ಕಡ್ಡಿಯಂತಾಗಿಸಿದನು. {1-5}

[ಓ ಪೈಗಂಬರರೇ, ಈ ಕುರ್‍ಆನ್ ನ್ನು ಕಲಿಸುವ ಸಲುವಾಗಿ] ನಾವು ನಿಮಗೆ ಓದಿಸುವೆವು; ನಂತರ ನೀವು ಅದನ್ನು (ಎಂದೂ) ಮರೆಯಲಾರಿರಿ; ಆದರೆ ಅಲ್ಲಾಹ್ ನು ಇಚ್ಛಿಸಿದ್ದರ ಹೊರತು! ಅವನು ಅಂತರಂಗ-ಬಹಿರಂಗಗಳನ್ನು ಅರಿಯುವವನಾಗಿದ್ದಾನೆ. {6-7}

[ಓ ಪೈಗಂಬರರೇ, ದೌತ್ಯ ನಿರ್ವಹಣೆಯ] ಹಾದಿಯನ್ನು ನಿಮಗಾಗಿ ನಾವು ಸರಳವಾಗಿಸಿ ಸುಗಮಗೊಳಿಸಿದ್ದೇವೆ. ಆದ್ದರಿಂದ, ಉಪದೇಶವು ಫಲಕಾರಿಯಾಗುವುದೆಂದಾದರೆ ನೀವಿನ್ನು (ಜನರಿಗೆ) ಉಪದೇಶ ಮಾಡಿರಿ. ಯಾರ [ಮನಸ್ಸಿನಲ್ಲಿ ಅಲ್ಲಾಹ್ ನಿಗಾಗಿ] ಭಯಭಕ್ತಿ ಇದೆಯೋ ಅಂಥವನು ಉಪದೇಶವನ್ನು ಸ್ವೀಕರಿಸುವನು. ಆದರೆ ಅತಿ ನಿಕೃಷ್ಟನಾದವನು ಅದರಿಂದ ತಪ್ಪಿಸಿಕೊಳ್ಳುವನು. ಅವನು ಮಹಾ ಅಗ್ನಿ ಕುಂಡವನ್ನು ಸೇರಲಿರುವನು; ಅನಂತರ ಅದರಲ್ಲಿ ಅವನು ಸಾಯುವುದೂ ಇಲ್ಲ, ಬದುಕಿ ಉಳಿಯುವುದೂ ಸಾಧ್ಯವಲ್ಲ! {8-13}

ಆತ್ಮ ಸಂಸ್ಕರಣೆ ಮಾಡಿಕೊಂಡು, ತನ್ನ ಒಡೆಯನ/ಸೃಷ್ಟಿಕರ್ತನ (ಪವಿತ್ರ) ನಾಮವನ್ನು ಯಥೇಚ್ಛವಾಗಿ ಸ್ಮರಿಸಿತ್ತಾ, ‘ಸಲಾತ್’ [ಅರ್ಥಾತ್: ನಮಾಝ್] ನಿರ್ವಹಿಸಿಕೊಂಡವನು ವಾಸ್ತವದಲ್ಲಿ ವಿಜಯ ಸಾಧಿಸಿದನು. {14-15}

ಆದರೆ [ಓ ಮಕ್ಕಃ ಪಟ್ಟಣದ ಜನರೇ,] ನೀವು ಲೌಕಿಕ/ಭೌತಿಕ ಜೀವನಕ್ಕೇ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದೀರಿ. ನಿಜವಾಗಿ ನಂತರ ಬರಲಿರುವ ಪರಲೋಕ [ಅರ್ಥಾತ್ ಮರಣೋತ್ತರ] ಜೀವನವು ಉತ್ತಮವಾದುದೂ, ಎಂದೂ ಕೊನೆಗೊಳ್ಳದ ಶಾಶ್ವತವಾದ ಜೀವನವೂ ಆಗಿದೆ. ಈ ಎಲ್ಲ ವಿಷಯಗಳು ಮುಂಚಿನ [ಅರ್ಥಾತ್ ಗತ ಪ್ರವಾದಿಗಳ] ಗ್ರಂಥಗಳಲ್ಲೂ ಇತ್ತು; ಇಬ್ರಾಹೀಮ್ ಮತ್ತು ಮೂಸಾ ರವರ ಗ್ರಂಥಗಳಲ್ಲಿಯೂ (ಇದನ್ನೇ ಹೇಳಲಾಗಿತ್ತು). {16-19}

Advertisements

2 thoughts on “ಅಲ್-ಅ’ಲಾ

  1. ಅಸ್ಸಲಾಂ ಅಲೈಕುಂ,
    ಕರಕಲು ಎಂಬ ಪದವು ಸೂಕ್ತವಲ್ಲವೆನಿಸುತ್ತದೆ, ಕರಕಲು ಎಂಬುದು ಬೆಂಕಿಯ ಸಂಪರ್ಕದಿಂದ ಆಗವುದಾಗಿದೆ, ಇಲ್ಲಿ ಬಿಸಿಲಿನ ಹೊಡತಕ್ಕೆ ಕಪ್ಪಾಗವುದಾಗಿದೆ.
    ಸುಹ್’ಫಿಯ ವಿವರಣೆ ಹೀಗೆ ಮಾಡಬಹುದು, ಅದು ಚರ್ಮದ ಸುರುಳಿಗಳು (scrolls – manuscripts), ಈ ಪದವನ್ನು ನಾವು ಮುಸ್’ಹಫ್ ಎಂದು ಕುರ್’ಆನನ್ನು ಹೇಳುತ್ತೇವೆ.ಹಿಂದೆ ಮುಸ್’ಹಫಿನ ಬೈಂಡ್ ಚರ್ಮದಿಂದ ಬರುತ್ತಿತ್ತು. ಸುಹ್’ಫಿ ಎಂಬ ಪದಕ್ಕೆ ಸೂಕ್ತವಾದ ಪದ ಕನ್ನಡದಲ್ಲಿ ಇಲ್ಲ. ಪೂರ್ವ ಗ್ರಂಥಗಳಲ್ಲಿ ಎಂದು ಬಳಸಬಹುದು.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s