ಅಲ್-‘ಆದಿಯಾತ್

aadiyaat

ಪರಮ ಕಾರುಣ್ಯವಂತನೂ ಸಾದ್ಯಂತ ದಯಾಮಯಿಯೂ ಆದ ಅಲ್ಲಾಹ್ ನ ನಾಮದೊಂದಿಗೆ (ಆರಂಭಿಸುವೆನು)!

ಏದುಸಿರು ಬಿಡುತ್ತಾ ಧಾವಿಸುವ, ಗೊರಸು ಅಪ್ಪಳಿಸಿ ಕಿಡಿಯೆಬ್ಬಿಸುವ, ಮುಂಜಾವಿನ ವೇಳೆಯೇ (ಶತ್ರುವಿನ ಮೇಲೆ) ದಾಳಿಯಿಡುವ ಮತ್ತು [ನಾಗಾಲೋಟದಿಂದ ಓಡಿ] ಧೂಳೆರಚುತ್ತಾ (ಶತ್ರುವಿನ) ಸೇನೆಯನ್ನು ಭೇದಿಸಿ ಒಳನುಗ್ಗುವ (ಯುದ್ಧ ಕುದುರೆಗಳು) ಸಾಕ್ಷಿ! ನಿಜವಾಗಿಯೂ ಮನುಷ್ಯನು ತನ್ನ ಸೃಷ್ಟಿಕರ್ತ/ಒಡೆಯನಿಗೆ ತೀರಾ ಕೃತಘ್ನನಾಗಿದ್ದಾನೆ. ಹೌದು, ಅವನ ಆ ಕೃತಘ್ನತೆಗೆ ಸ್ವತಃ ಅವನೇ ಸಾಕ್ಷಿಯಾಗಿದ್ದಾನೆ! ವಾಸ್ತವದಲ್ಲಿ ಅವನು ಸಿರಿ-ಸಂಪತ್ತಿನ ಅತಿಯಾದ ವ್ಯಾಮೋಹದಲ್ಲಿ ಸಿಲುಕಿದ್ದಾನೆ. {1-8}

[ವಿಚಾರಣೆಯ ದಿನ] ಸಮಾಧಿಗಳಲ್ಲಿ (ಹೂಳಲ್ಪಟ್ಟವರನ್ನು) ಎಬ್ಬಿಸಿ ನಿಲ್ಲಿಸಿದಾಗ ಅವರ ಎದೆಯಾಳದಲ್ಲಿರುವ ಎಲ್ಲ (ರಹಸ್ಯಗಳನ್ನು) ಹೊರಗೆಡಹಲಾಗುವುದು ಎಂದು (ಮನುಷ್ಯನಿಗೆ) ತಿಳಿಯದೆ ಹೋಯಿತೇ? ಖಂಡಿತವಾಗಿಯೂ ಆ ದಿನ ಅವರ ಸೃಷ್ಟಿಕರ್ತ/ಒಡೆಯನಿಗೆ ಅವರ (ಕೃತ್ಯಗಳ) ಕುರಿತಾದ ಸಂಪೂರ್ಣವಾದ ಜ್ಞಾನವಿರುವುದು! {9-11}

Advertisements

One thought on “ಅಲ್-‘ಆದಿಯಾತ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s