ಅಲ್-ಇನ್ಫಿತಾರ್

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಆಕಾಶವು ಸ್ಫೋಟಗೊಳ್ಳುವಾಗ; ಮತ್ತು ನಕ್ಷತ್ರಗಳು ಚದುರಿ ಹೋಗುವಾಗ; ಮತ್ತು ಸಮುದ್ರವು ಸಿಡಿದೆದ್ದು ತನ್ನ ಎಲ್ಲೆಯನ್ನು ಮೀರುವಾಗ; ಮತ್ತು ಗೋರಿಗಳು ತೆರೆಯಲ್ಪಡುವಾಗ – ತಾನು ಏನನ್ನು ಸಂಪಾದಿಸಿ ಮುಂದೆ (ಪರಲೋಕಕ್ಕಾಗಿ) ಕಳಿಸಿರುವೆನು ಮತ್ತು ಏನನ್ನು ತನ್ನ ಹಿಂದೆ (ಭೂಲೋಕದಲ್ಲಿ) ಬಿಟ್ಟು ಬಂದಿರುವೆನು – ಎಂಬುದರ ವಾಸ್ತವವನ್ನು ಪ್ರತಿಯೊಬ್ಬ ಮನುಷ್ಯನೂ ತಿಳಿದು ಕೊಳ್ಳುವನು. [1-5]

ಹೇ ಮನುಷ್ಯ! ಅತ್ಯಂತ ಉದಾರಿಯಾದ (ನೈಜ ಒಡೆಯನೂ ಪರಿಪಾಲಕನೂ ಆದ) ನಿನ್ನ ಪ್ರಭುವಿನ ವಿಷಯದಲ್ಲಿ ನಿನ್ನನ್ನು ವಂಚಿಸಿ ಬಿಟ್ಟಿರುವುದಾದರೂ ಏನು? ನಿನ್ನನ್ನು ಸೃಷ್ಟಿಸಿ, (ನಿನ್ನ ಅಸ್ತಿತ್ವವನ್ನು) ಸಕಲ ರೀತಿಯಲ್ಲಿ ಸರಿಪಡಿಸಿ, ನಂತರ ಸಂತುಲಿತಗೊಳಿಸಿದ ಆ ಪ್ರಭು ತಾನಿಚ್ಚಿಸಿದ ಆಕೃತಿಯಲ್ಲಿ ನಿನ್ನ (ಶರೀರ) ವನ್ನು ಜೋಡಿಸಿರುವನು. [6-8]

ಹಾಗಲ್ಲ; ನೀವಾದರೋ ಕರ್ಮಗಳ ಫಲಿತಾಂಶದ ದಿನವನ್ನು ಸುಳ್ಳೆಂದು ನಿರಾಕರಿಸುತ್ತೀರಿ. ನಿಮ್ಮ ಮೇಲೆ (ಕರ್ಮಗಳನ್ನು ದಾಖಲು ಪಡಿಸುವ ಮಲಕ್ ಗಳನ್ನು) ಕಾವಲುಗಾರರಾಗಿ ನೇಮಿಸಲಾಗಿದೆ. ಅವರು ಆದರಣೀಯರೂ (ನಿಮ್ಮ ಕರ್ಮಗಳನ್ನು ಚಾಚೂ ತಪ್ಪದೆ) ಬರೆದಿಡುವವರೂ ಆಗಿದ್ದಾರೆ. ನೀವು ಏನೆಲ್ಲಾ ಮಾಡುತ್ತಿರುವಿರೋ ಆ ಕುರಿತು ಅವರು (ಚೆನ್ನಾಗಿ) ಬಲ್ಲವರಾಗಿದ್ದಾರೆ. [9-12]

ಖಂಡಿತವಾಗಿ ಸದಾಚಾರಿ ಸಜ್ಜನರು ‘ನಈಮ್’ (ಎಂಬ ಐಶಾರಾಮ ತುಂಬಿದ ಸ್ವರ್ಗೋದ್ಯಾನಗಳಲ್ಲಿ) ಇರುವರು. ಮತ್ತು ದುಷ್ಕರ್ಮಿ ಪಾಪಿಗಳು ‘ಜಹೀಮ್’ (ಎಂಬ ಭುಗಿಲೆದ್ದುರಿಯುವ ನರಕದಲ್ಲಿ) ಇರುವರು. (ಒಳಿತು-ಕೆಡುಕುಗಳ ನಡುವೆ) ತೀರ್ಮಾನವಾಗುವ ಆ ದಿನ ಅವರು ಅದರಲ್ಲಿ ಉರಿಯಲಿರುವರು; ಅದರಿಂದ ಅವಿತುಕೊಳ್ಳಲು ಅವರಿಗೆ ಸಾಧ್ಯವಾಗದು. ಕರ್ಮಗಳಿಗೆ ಪ್ರತಿಫಲ ನೀಡಲಾಗುವ ದಿನ (ಅರಬಿ: ಯೌಮ್ ಆದ್-ದೀನ್) ಏನೆಂದು ನಿಮಗೆ ಗೊತ್ತಿದೆಯೇ? ಹೌದು! ಪ್ರತಿಫಲದ ದಿನದ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ? ಅಂದು ಯಾವೊಬ್ಬನಿಗೂ ಮತ್ತೊಬ್ಬನ ಮೇಲೆ (ಯಾವುದೇ ರೀತಿಯ ಹಿತವನ್ನು ಮಾಡುವ) ಅಧಿಕಾರವು ಇರುವುದಿಲ್ಲ. ಪರಮಾಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹ್ ನಿಗೆ ಮಾತ್ರವಾಗಿರುವುದು! [13-19]

Advertisements

One thought on “ಅಲ್-ಇನ್ಫಿತಾರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s