ಅಲ್-ಇನ್ಶಿಕಾಕ್

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಆಕಾಶವು ಇಬ್ಭಾಗವಾಗಿ ಸೀಳಲ್ಪಟ್ಟಾಗ; ಅದು ಅದರ ಪ್ರಭುವಿನ ಆಜ್ಞೆಯನ್ನು ಪಾಲಿಸುವುದು. (ಆಜ್ಞೆ ಪಾಲನೆಯೇ) ಅದರ ಕರ್ತವ್ಯವಾಗಿದೆ! ಮತ್ತು ಭೂಮಿಯು ವಿಸ್ತರಿಸಲ್ಪಟ್ಟಾಗ; ಅದು ತನ್ನೊಳಗೆ ಇರುವುದೆಲ್ಲವನ್ನೂ ಹೊರಹಾಕಿ, ಬರಿದಾಗಿ ಬಿಡುವುದು. ಅದು ಅದರ ಪ್ರಭುವಿನ ಆಜ್ಞೆಯನ್ನು ಪಾಲಿಸುವುದು. (ಆಜ್ಞೆ ಪಾಲನೆಯೇ) ಅದರ ಕರ್ತವ್ಯವಾಗಿದೆ! [1-5]

ಓ ಮನುಷ್ಯ! ಖಂಡಿತವಾಗಿ ನೀನು ಅತಿ ಹೆಚ್ಚಿನ ಪ್ರಯಾಸದೊಂದಿಗೆ ನಿನ್ನ ಪ್ರಭುವಿನ ಕಡೆಗೆ (ಸಾಗುತ್ತಾ ಇರುವೆ); ಕೊನೆಗೆ ಪ್ರಭುವನ್ನು ಭೇಟಿಯಾಗಲಿರುವೆ. ಆಮೇಲೆ (ಅವರವರ) ಕರ್ಮಗಳ ದಾಖಲಾತಿ ಪುಸ್ತಿಕೆಯನ್ನು (ಪ್ರತಿಫಲದ ದಿನ) ಯಾರಿಗೆ ಬಲಗೈಯಲ್ಲಿ ನೀಡಲಾಗುವುದೋ – ಅಂಥವನ ವಿಚಾರಣೆಯು ಬಲು ಸುಲಭವಾಗಿ ನಡೆಯುವುದು, ಮತ್ತು ಅವನು ತನ್ನವರ ಕಡೆಗೆ ಹರ್ಷಚಿತ್ತನಾಗಿ ಮರಳುವನು. ಇನ್ನು ಯಾರಿಗೆ ಕರ್ಮಗಳ ದಾಖಲಾತಿ ಪುಸ್ತಿಕೆಯನ್ನು ಅವನ ಬೆನ್ನ ಹಿಂದಿನಿಂದ ನೀಡಲಾಗುವುದೋ – ಅಂಥವನು ತನಗೆ ಸಾವಾದರೂ ಬಂದು ಬಿಡಬಾರದೇ ಎಂದು ಗೋಳಿಡುವನು; ಅವನು ಧಗಧಗಿಸುವ ಅಗ್ನಿಯನ್ನು ಪ್ರವೇಶಿಸುವನು. ಅವನು ತುಂಬಾ ಹರ್ಷಿತನಾಗಿ ತನ್ನವರೊಂದಿಗೆ (ಭೂಲೋಕದಲ್ಲಿ ಮೈಮರೆತು) ಜೀವಿಸಿದ್ದನು. ತನಗೆಂದೂ (ಸೃಷ್ಟಿಕರ್ತನಾದ ಅಲ್ಲಾಹ್ ನ ಕಡೆಗೆ) ಮರಳಲಿಕ್ಕಿಲ್ಲ ಎಂದು ಭಾವಿಸಿದ್ದನು. ಏಕಿಲ್ಲ? ಅವನ ಪ್ರಭುವಾದರೋ ಅವನನ್ನು ಸದಾ ನೋಡುತ್ತಿದ್ದನು. [6-15]

ಇಲ್ಲ; ಮುಸ್ಸಂಜೆಯ ಕೆಂಬೆಳಕಿನ ಪ್ರಮಾಣ ಮಾಡುತ್ತೇನೆ. ರಾತ್ರಿಯು ಮತ್ತು ಅದು ಏನನ್ನು ಆವರಿಸಿಕೊಳ್ಳುತ್ತದೆಯೋ ಅದು ಸಾಕ್ಷಿ; ಮತ್ತು ಪೂರ್ಣವಾಗಿ ಬೆಳಗಿದ (ಹುಣ್ಣಿಮೆಯ) ಚಂದಿರನೂ ಸಾಕ್ಷಿ! ನೀವು ಹಂತ ಹಂತವಾಗಿಯೇ ಮೇಲೇರಬೇಕಾಗಿದೆ (ಅಥವಾ: ಒಂದೊಂದೇ ಘಟ್ಟಗಳನ್ನು ದಾಟಬೇಕಾಗಿದೆ). ಅಲ್ಲ, ಅವರಿಗೇನಾಗಿ ಬಿಟ್ಟಿದೆ? ಅವರು (ಈ ಪರಮ ಸತ್ಯವನ್ನು) ನಂಬುವುದಿಲ್ಲವೇಕೆ? ಅವರ ಮುಂದೆ “ಕುರ್‍ಆನ್” ಓದಿ ಕೇಳಿಸಿದಾಗ ಅವರು (ನಮಗೆ) ಸಾಷ್ಟಾಂಗ ಪ್ರಣಾಮ (ಅರ್ಥಾತ್: ಸುಜೂದ್/ಸಜ್ದಃ) ಮಾಡುವುದಿಲ್ಲ, ಬದಲಾಗಿ ಆ ಧಿಕ್ಕಾರಿಗಳು (ಸತ್ಯವನ್ನು/ಕುರ್‍ಆನ್ ಅನ್ನು) ತಿರಸ್ಕರಿಸುತ್ತಾರೆ. ಅವರು ಕೂಡಿಟ್ಟಿರುವ (ಪಾಪಗಳ ಬಗ್ಗೆ) ಅಲ್ಲಾಹನು ಚೆನ್ನಾಗಿ ಬಲ್ಲನು. ಆದ್ದರಿಂದ (ಓ ಮುಹಮ್ಮದ್! ಅಲ್ಲಾಹ್ ಮತ್ತು ಪ್ರತಿಫಲದ ದಿನವನ್ನು ಸತ್ಯವೆಂದು) ನಂಬಿದವರು ಮತ್ತು (ಭೂಲೋಕದಲ್ಲಿ) ಸತ್ಕಾರ್ಯವನ್ನು ಮಾಡಿದವರ ಹೊರತು (ಧಿಕ್ಕಾರಿಗಳಿಗೆ) ವೇದನಾಯುಕ್ತ ಶಿಕ್ಷೆಯ ‘ಸುವಾರ್ತೆ’ ತಲುಪಿಸಿ ಬಿಡಿರಿ. (ನಂಬಿದವರು ಮತ್ತು ಸತ್ಕಾರ್ಯವನ್ನು ಮಾಡಿದವರಿಗೆ) ಎಂದೂ ಕೊನೆಗಾಣದ ಪ್ರತಿಫಲವಿದೆ. [16-25]

Advertisements

One thought on “ಅಲ್-ಇನ್ಶಿಕಾಕ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s