ಅಲ್-ಬಯ್ಯಿನಃ

bayyinah

ಅಲ್ಲಾಹ್ ನ ಹೆಸರಿನೊಂದಿಗೆ – ಅವನು ಅತಿ ಹೆಚ್ಚು ಕರುಣೆಯುಳ್ಳವನು; ನಿರಂತರ ಕರುಣೆ ತೋರುವವನು!

(ದಿವ್ಯ) ಗ್ರಂಥವನ್ನು ಹೊಂದಿರುವಂತಹ [ಯಹೂದ್ಯರು] ಹಾಗೂ ಬಹುದೇವವಿಶ್ವಾಸಿಗಳಾದ [ವಿಗ್ರಹಾರಾಧಕ ಅರಬರ] ಪೈಕಿ [ಪೈಗಂಬರರ ಸಂದೇಶವನ್ನು] ಧಿಕ್ಕರಿಸಿ ಬಿಟ್ಟವರು, ತಮ್ಮ ಬಳಿಗೆ ಆ ‘ಸ್ಪಷ್ಟವಾದ ದೃಷ್ಟಾಂತವು’ ಬರುವ ತನಕವೂ (ತಮ್ಮ ಧಿಕ್ಕಾರದ ನಿಲುವನ್ನು) ತೊರೆಯುವವರಲ್ಲ! ಅಂದರೆ [ಅವರ ಅಪೇಕ್ಷೆಯಂತೆ] ಅತ್ಯಂತ ನಿಖರವಾದ ಆದೇಶಗಳಿರುವ ಪರಮ ಪಾವನವಾದ ಗ್ರಂಥವೊಂದನ್ನು ಪಠಿಸುತ್ತಾ ಅಲ್ಲಾಹ್ ನ ಬಳಿಯಿಂದ ದೂತನೊಬ್ಬನು [ನೇರವಾಗಿ ಆಕಾಶದಿಂದಲೇ ಇಳಿದು] ಬರುವ ತನಕವೂ (ಅವರು ತಮ್ಮ ಪಟ್ಟು ಬಿಡುವವರಲ್ಲ)! {1-3}

[ಆದರೆ ವಾಸ್ತವವೇನೆಂದರೆ,] ಗ್ರಂಥವನ್ನು ಪಡೆದುಕೊಂಡಿದ್ದ [ಯಹೂದ್ಯರು ಈ ಹಿಂದೆಯೂ ಸತ್ಯವನ್ನು ಒಪ್ಪಿಕೊಳ್ಳುವ ವಿಷಯದಲ್ಲಿ] ಭಿನ್ನಮತಕ್ಕೊಳಗಾದುದು, ಅವರ ಬಳಿಗೆ ಅಂತಹ ‘ಸ್ಪಷ್ಟವಾದ ದೃಷ್ಟಾಂತವು’ ಬಂದ ಬಳಿಕವೇ ಆಗಿತ್ತು! ಧರ್ಮವನ್ನು ನಿಷ್ಕಳಂಕವಾಗಿಸಿ (ಅದನ್ನು) ಅಲ್ಲಾಹ್ ನಿಗೆ ಮಾತ್ರ ಮೀಸಲಾಗಿಸಿಕೊಂಡು, ಸಂಪೂರ್ಣ ತನ್ಮಯತೆಯೊಂದಿಗೆ ಅವನನ್ನು ಮಾತ್ರ ಆರಾಧಿಸಬೇಕು; ನಮಾಝ್ ನಿರ್ವಹಿಸಬೇಕು ಮತ್ತು ಝಕಾತ್ ನೀಡುತ್ತಿರಬೇಕು – [ನೀವು ಹಾಗೆ ಮಾಡಿಕೊಂಡರೆ] ಅದುವೇ ನಿಜವಾದ ಧರ್ಮ ಎಂದೇ (ಗತ ಗ್ರಂಥಗಳಲ್ಲಿಯೂ) ಅವರಿಗೆ ಆದೇಶಿಸಲಾಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ! {4-5}

ಗ್ರಂಥದವರು ಹಾಗೂ ಬಹುದೇವವಿಶ್ವಾಸಿಗಳ ಪೈಕಿ ಧಿಕ್ಕಾರದ ನಿಲುವು ತಾಳಿದವರು ಖಂಡಿತವಾಗಿ ನರಕದ ಬೆಂಕಿಯಲ್ಲಿ ಸದಾ ಕಾಲ ಬಿದ್ದುಕೊಂಡಿರುವರು; ಅವರೇ ಜೀವಿಗಳ ಪೈಕಿ ಅತ್ಯಂತ ನಿಕೃಷ್ಟ ಜೀವಿಗಳು! [ಅದಕ್ಕೆ ಪ್ರತಿಯಾಗಿ, ಪೈಗಂಬರರ ಸಂದೇಶದಲ್ಲಿ] ವಿಶ್ವಾಸವಿರಿಸಿಕೊಂಡು ಜೊತೆಗೆ ಸತ್ಕರ್ಮಗಳನ್ನು ಕೈಗೊಂಡವರು ಸೃಷ್ಟಿಗಳ ಪೈಕಿ ಖಂಡಿತ ಅತ್ಯುತ್ತಮ ಸೃಷ್ಟಿಗಳು. ಅಂಥವರಿಗೆ ನೆಲದಲ್ಲಿ ನದಿಗಳು ಹರಿಯುತ್ತಿರುವ ಶಾಶ್ವತವಾದ ಸ್ವರ್ಗೋದ್ಯಾನಗಳು ಪ್ರತಿಫಲದ ರೂಪದಲ್ಲಿ ಅವರ ಸೃಷ್ಟಿಕರ್ತನ ಬಳಿ ಸಿದ್ಧವಿದೆ. ಅವರು ಅದರಲ್ಲಿ ಸದಾಕಾಲ ನೆಲೆಸುವರು. ಅಲ್ಲಾಹ್ ನು ಅವರ (ನಡತೆಯಿಂದ) ಸಂತೃಪ್ತನಾಗಿರುವನು; ಮತ್ತು ಅವರೂ ಸಹ (ಅಲ್ಲಾಹ್ ನ ಬಗ್ಗೆ) ಸಂತುಷ್ಟರಾಗಿರುವರು – ಇವೆಲ್ಲವೂ ತನ್ನ ಸೃಷ್ಟಿಕರ್ತನ ಭಯವಿರಿಸಿಕೊಂಡವನಿಗೆ ಮಾತ್ರ ಮೀಸಲು. {6-8}

Advertisements

4 thoughts on “ಅಲ್-ಬಯ್ಯಿನಃ

 1. ಅಸ್ಸಲಾಂ ಅಲೈಕುಂ,
  ಅಹ್ಲಿಲ್ ಕಿತಾಬ್ ಎಂದರೆ ಪೂರ್ವಗ್ರಂಥದವರು ಯಹೂದ್ಯರು ಮಾತ್ರವಲ್ಲ.ಿಇದರಲ್ಲಿ ನೂಹ(ಅ)ಸಂತತಿ,ಇಬ್ರಾಹಿಮ್ (ಅ)ಸಂತತಿ, ಮೂಸ(ಅ) ಸಂತತಿ ಮತ್ತು ಈಶಾ(ಅ) ಸಂತತಿ ಆಗಿರುತ್ತದೆ.(ಕುರ್’ಆನಿ ಭಾಷಾ ಪ್ರಯೋಗ ಅನುಯಾಯಿಗಳನ್ನು ಅವರ ಕುಟುಂಬ [ಸಂತತಿ] ಎಂಬುದಾಗಿದೆ.

  ಇದು ನನ್ನ ಅಭಿಪ್ರಾಯ ಅಷ್ಟೇ.

  Liked by 1 person

  1. wa alaikum salam…. nimma abhipraya tumbaa sari. aadare idu aadhya ghattada surah aagiddu, ee surah dalli abhisambodhisurvudu mushrikarada arabarannu haagu dhikkaarigalaada yahoodyarannu. nantarada ghattagalalli kraistarannu saha serisalagide. neevu al baqarah mattu aali imran na nanna tarjumeyannu nodabahudu. thanks for the observation wa jazaakumullahu khair

   Liked by 1 person

 2. ಅಸ್ಸಲಾಂ ಅಲೈಕುಂ,
  ಹೆಚ್ಚಿನ ಇಂಗ್ಲಿಷ್ ಅನುವಾದಕರು ಅನ್ನ್’ಹಾರ್ ಅಥವಾ ನಹರ್ ಎಂಬ ಪದ ನದಿ river ಎಂದು ಕೊಟ್ಟಿದ್ದಾರೆ ನಹರ್’ನ root word, ಪರಿಶೀಲಿಸಿದಾಗ ಹೆಚ್ಚಿನಕಡೆ stream ಎಂಬ ಅರ್ಥ ಬರುತ್ತದೆ. ನದಿಯು ವಿಶಾಲವಾದುದು ಸ್ವರ್ಗೋದ್ಯಾನಕ್ಕೆ ಹೊಂದಾಣಿಕೆಯಾಗುವುದು streamಗಳು. ಮಲೆಯಾಳಂ ಬಾಷಾಂತರಗಳಲ್ಲಿ ‘ಅರುವಿ’ ಎಂಬ ಪದವನ್ನು ಬಾಷಾಂತರಕಾರರು ಪ್ರಯೋಗಿಸಿದ್ದಾರೆ. ಅರುವಿ ಎಂದರೆ ನದಿಯಲ್ಲ ಅದು ತೊರೆ. ತೊರೆಯ ಪ್ರಯೋಗ ಕನ್ನಡದಲ್ಲಿ ಕಡಿಮೆ. ದಿವ್ಯ ಕುರ್’ಆನ್’ನಲ್ಲಿ ಕಾಲುವೆ ಎಂಬ ಪದ ಉಪಯೋಗಿಸಿದ್ದಾರೆ. ಇದು ನನ್ನ ಮನಸ್ಸಿಗೆ ತೋರಿದ ಅಭಿಪ್ರಾಯ ಮಾತ್ರ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s