ಅಲ್-ಬುರೂಜ್

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ನಕ್ಷತ್ರಪುಂಜಗಳು ತುಂಬಿರುವ ಆಕಾಶವು ಸಾಕ್ಷಿ! ವಾಗ್ದಾನ ಮಾಡಲ್ಪಟ್ಟ ಆ (ಪ್ರತಿಫಲದ) ದಿನವು ಸಾಕ್ಷಿ! ನೋಡುವವನು (ಅರ್ಥಾತ್: ಮನುಷ್ಯ) ಸಾಕ್ಷಿ ಮತ್ತು ಯಾವುದನ್ನು (ಅರ್ಥಾತ್: ಅಂತ್ಯದಿನ) ನೊಡುತ್ತಾನೋ ಅದೂ ಸಾಕ್ಷಿ! ಕಂದಕವನ್ನು ಅಗೆದು, ಇಂಧನ ತುಂಬಿ (‘ಮೂಮಿನ್’ ಗಳನ್ನು ಸುಟ್ಟು ಹಾಕುವ ಸಲುವಾಗಿ) ಬೆಂಕಿ ಉರಿಸಿದವರು ನಾಶವಾದರು! ಅವರು ‘ಮೂಮಿನ್’ ಗಳಿಗೆ ತಾವು ನೀಡುತ್ತಿದ್ದ (ಬೆಂಕಿಯ) ಶಿಕ್ಷೆಯನ್ನು (ಕಣ್ಣಾರೆ) ನೋಡುತ್ತಲಿದ್ದರು; ಆಗ ಅವರು (ಉರಿಯುತ್ತಿರುವ ಕಂದಕದ) ಬಳಿಯೇ ಕುಳಿತಿದ್ದರು. ಪ್ರಬಲನೂ ಸ್ತುತ್ಯರ್ಹನೂ ಆದ ಅಲ್ಲಾಹ್ ನಲ್ಲಿ ವಿಶ್ವಾಸವಿರಿಸಿದ್ದುದಲ್ಲದೆ, ‘ಮೂಮಿನ್’ ಗಳ ಮೇಲೆ (ಅಂಥ ಕಠೋರ) ಪ್ರತೀಕಾರ ಅವರು ತೀರಿಸಿದುದು ಬೇರಾವುದೇ ಕಾರಣಕ್ಕಾಗಿ ಆಗಿರಲಿಲ್ಲ. ಭೂಮಿ ಮತ್ತು ಆಕಾಶಗಳ ಅಧಿಪತ್ಯವು ಅಲ್ಲಾಹ್ ನಿಗೆ ಮಾತ್ರ; ಅವನು ಎಲ್ಲ ವಿಷಯಗಳಿಗೂ ಪ್ರತ್ಯಕ್ಷದರ್ಶಿಯಾಗಿದ್ದಾನೆ. [1-9]

ಯಾರು ಅಲ್ಲಾಹ್ ನಲ್ಲಿ ವಿಶ್ವಾಸವಿರಿಸಿದ (ಅಥವಾ: ‘ಮೂಮಿನ್’ ಗಳಾದ) ಸ್ತ್ರೀ ಮತ್ತು ಪುರುಷರನ್ನು (‘ಮೂಮಿನ್’ ಗಳಾದ ಕಾರಣಕ್ಕಾಗಿ) ಮರ್ದಿಸಿದರೋ, ಬಳಿಕ (ಆ ದುಷ್ಕೃತ್ಯಕ್ಕಾಗಿ) ಪಶ್ಚಾತಾಪ ಪಡಲಿಲ್ಲವೋ ಅಂಥವರಿಗೆ ಖಂಡಿತವಾಗಿ ನರಕದ ಯಾತನೆ ಮತ್ತು ಬೆಂಕಿಯ ಶಿಕ್ಷೆ ಕಾದಿದೆ. ಇನ್ನು ಯಾರು ಅಲ್ಲಾಹ್ ನಲ್ಲಿ ವಿಶ್ವಾಸವಿಟ್ಟು ನಿಷ್ಕಳಂಕತೆಯೊಂದಿಗೆ ಸತ್ಕಾರ್ಯಗಳನ್ನು ಮಾಡುತ್ತಾರೋ ಅಂಥವರಿಗೆ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ; ಅದುವೇ ಅತಿ ಮಹತ್ತರವಾದ ಗೆಲುವಾಗಿದೆ. [10-11]

(ಹೇ ಮನುಷ್ಯ!) ನಿಸ್ಸಂದೇಹವಾಗಿಯೂ ನಿನ್ನ ಪ್ರಭುವಿನ ಹಿಡಿತವು ಬಲು ಕಠಿಣವಾದುದು. ಖಂಡಿತವಾಗಿಯೂ ಮೊದಲ ಬಾರಿಗೆ (ನಿಮ್ಮನ್ನು) ಸೃಷ್ಟಿಸಿದವನೂ ಮತ್ತು (ಮರಣಾನಂತರ ನಿಮ್ಮನ್ನು) ಪುನಃ ಸೃಷ್ಟಿಸುವವನೂ ಅವನೇ! ಅವನು ಕ್ಷಮಾಶೀಲನೂ ಅತಿ ಹೆಚ್ಚು ಪ್ರೀತಿಸುವವನೂ ಹೌದು. ವಿಶ್ವದ ಅಧಿಕಾರ ಗದ್ದುಗೆಯ ವೈಭವಗಳೆಲ್ಲವೂ ಅವನದ್ದೇ ಆಗಿದೆ. ತಾನಿಚ್ಛಿಸಿದ್ದನ್ನು ಮಾಡಿಯೇ ತೀರುವ ಶಕ್ತಿವಂತನವನು! [12-16]

‘ಫಿರ್‍ಔನ್’ ಮತ್ತು ‘ತಮೂದ್’ ರ ಸೇನಾಪಡೆಗಳ ವೃತ್ತಾಂತವು ನಿಮಗೆ ತಲುಪಿದೆಯಲ್ಲವೇ? ಆದರೂ (ಅಲ್ಲಾಹ್ ನ ಸಂದೇಶವನ್ನು) ನಿಷೇಧಿಸಿದವರು ತಿರಸ್ಕಾರದಲ್ಲಿ ತೊಡಗಿದ್ದಾರೆ. ಅಲ್ಲಾಹ್ ನು (ಸತ್ಯವನ್ನು ನಿಷೇಧಿಸಿದವರನ್ನು) ಎಲ್ಲಾ ಕಡೆಗಳಿಂದಲೂ ಸುತ್ತುವರಿದಿದ್ದಾನೆ. [17-20]

ವಾಸ್ತವದಲ್ಲಿ ಇದೊಂದು ವೈಭವಪೂರ್ಣವಾದ ‘ಕುರ್‍ಆನ್’ ಆಗಿದೆ; ಸುರಕ್ಷಿತ ಫಲಕದಲ್ಲಿ (ಕೆತ್ತಿ) ಇರಿಸಲಾಗಿದೆ! [21-22]

Advertisements

One thought on “ಅಲ್-ಬುರೂಜ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s