ಅನ್-ನಾಸ್

an-naas

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಮಹಾ ಕರುಣಾಮಯಿ, ಅವನ ಕಾರುಣ್ಯವು ಶಾಶ್ವತ!

ಪದೇಪದೇ ಗೊಂದಲಗಳನ್ನು ಬಿತ್ತಿ (ಮನುಷ್ಯರನ್ನು) ಚಂಚಲಚಿತ್ತರಾಗಿಸುವನ ಕಾಟದಿಂದ ನಾನು ಮನುಷ್ಯರ ಸೃಷ್ಟಿಕರ್ತ/ಸಂರಕ್ಷಕ, ಮನುಷ್ಯರ ಅಧಿಪತಿ, ಮನುಷ್ಯರ ಆರಾಧ್ಯನಾದ (ಅಲ್ಲಾಹ್ ನ) ರಕ್ಷಣೆಯನ್ನು ಬಯಸುತ್ತೇನೆ – ಎಂದು (ಓ ಪೈಗಂಬರರೇ) ನೀವು ಪ್ರಾರ್ಥಿಸಿರಿ. ಮನುಷ್ಯರ ಮನಸ್ಸುಗಳಲ್ಲಿ ಅವನು ನಿರಂತರ ದುಷ್ಪ್ರೇರಣೆ ಉಂಟುಮಾಡುತ್ತಾನೆ. [ಮನುಷ್ಯರನ್ನು ಹಾಗೆ ಕಾಡುವವರಲ್ಲಿ] ಕೆಲವರು ‘ಜಿನ್ನ್’ ವರ್ಗಕ್ಕೆ ಸೇರಿದವರಾಗಿದ್ದಾರೆ; (ಇನ್ನು ಕೆಲವರು) ‘ಮನುಷ್ಯ’ ವರ್ಗಕ್ಕೆ ಸೇರಿದವರಾಗಿದ್ದಾರೆ! [1-6]

3 thoughts on “ಅನ್-ನಾಸ್

  1. ಅಸ್ಸಲಾಮ್ ಅಲೈಕುಂ. ಭಾಷಾಂತರದ ಅಲ್ ಬಕರದ
    ಆಯತ್ತುಲ್ ಖುರ್ಸಿ ಮತ್ತು ಅನ್ನಾಸ್ ‘ನ್ನು ಓದಿದೆ. ನಿಮ್ಮ ಪದಗಳ ಆಯ್ಕೆ ಇಷ್ಟವಾಯಿತು. ಮುಂದೆ ಓದಿ ಅಭಿಪ್ರಾಯ ತಿಳಿಸುತ್ತೇನೆ.

    Like

ನಿಮ್ಮ ಟಿಪ್ಪಣಿ ಬರೆಯಿರಿ