ಅಲ್ ಫಾತಿಹಃ

ترجمة سورة الفاتحة من القرآن الكريم إلى اللغة الكنادية من قبل المترجم الخادم ، إقبال صوفي ، الكويت

{1 ನೇ ಸೂರಃ — ಮಕ್ಕಿಯ್ಯಃ — ಆಯತ್ ಗಳು: 7}

fatihah

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುತ್ತೇನೆ); ಅವನು ಅತ್ಯಧಿಕ ದಯೆ ತೋರುವವನು, ಶಾಶ್ವತವಾದ ಕರುಣೆಯುಳ್ಳವನು! [1]

ಎಲ್ಲಾ ರೀತಿಯ ಪ್ರಶಂಸೆ, ಕೀರ್ತನೆ, ಸ್ತುತಿ-ಸ್ತೋತ್ರಗಳು ಲೋಕವಾಸಿಗಳ ಒಡೆಯ, ಸಂರಕ್ಷಕ, ಪರಿಪಾಲಕನಾದ ಅಲ್ಲಾಹ್ ನಿಗೆ ಮಾತ್ರವೇ ಸಲ್ಲುತ್ತದೆ. ಅವನು ಅತ್ಯಂತ ದಯಾಮಯನೂ ನಿರಂತರ ಕರುಣೆ ತೋರುವವನೂ ಆಗಿರುವನು. [ಮನುಷ್ಯರ ಕರ್ಮಗಳಿಗೆ ತಕ್ಕ] ಪ್ರತಿಫಲ ನೀಡಲಾಗುವ ದಿನದ ಸಾರ್ವಭೌಮ ಅಧಿಪತಿಯೂ (ಅಲ್ಲಾಹ್ ನೇ ಆಗಿರುವನು). [2-4]

(ಓ ಅಲ್ಲಾಹ್), ನಿನ್ನನ್ನು ಮಾತ್ರವೇ ನಾವು ಆರಾಧಿಸುತ್ತೇವೆ ಮತ್ತು ನಿನ್ನಲ್ಲಿ ಮಾತ್ರವೇ ನಾವು ಸಹಾಯಕ್ಕಾಗಿ ಮೊರೆಯಿಡುತ್ತೇವೆ. [ಆದ್ದರಿಂದ ನಮ್ಮೊಡೆಯಾ], ನಮಗೆ ನೇರವಾದ ಮಾರ್ಗವನ್ನು ತೋರಿಸಿ ಕೊಡು. ನೀನು ಯಾರನ್ನು ಅನುಗ್ರಹಿಸಿರುವೆಯೋ ಅಂಥವರು ನಡೆದ ಮಾರ್ಗದಲ್ಲಿ (ನಮ್ಮನ್ನು ನಡೆಸು). ನಿನ್ನ ಕ್ರೋಧಕ್ಕೆ ತುತ್ತಾದವರ ಮತ್ತು (ನೀನು ತೋರಿದ) ದಾರಿಯನ್ನು ತಪ್ಪಿದವರ ಮಾರ್ಗವಲ್ಲ! [5-7]

7 thoughts on “ಅಲ್ ಫಾತಿಹಃ

  1. ಅಸ್ಸಲಾಂ ಅಲೈಕುಂ,
    ಹಮ್ದ್ ಎಂಬ ಪದಕ್ಕೆ ಸರಿಯಾದ ಅನುವಾದ ಪ್ರಶಂಸೆ.
    ಕೀರ್ತನೆ, ಸ್ತುತಿ-ಸ್ತೋತ್ರಗಳು ಪ್ರಶಂಸೆಯ ಪರ್ಯಾಯ ಪದಗಳು ಅದು bracket ನ ಒಳಗಿದ್ದರೆ ಸೂಕ್ತ ಎಂದು ನನ್ನ ಅಭಿಪ್ರಾಯ.

    Liked by 1 person

    1. ವಅಲೈಕುಮ್ ಸಲಾಮ್ …. .’ಹಮ್ದ್’ ಎಂಬ ಸಾಧಾರಣ ಪದವು ಇಲ್ಲಿ ‘ಲಾಮ್-ಅತ್-ತಅರೀಫ್’ ನ ಸೇರ್ಪಡೆಯೊಂದಿಗೆ ‘ಅಲ್-ಹಮ್ದ್’ ಆಗಿರುವುದನ್ನು ಗಮನಿಸಿ. ಹಾಗೆ ಬಳಸಲಾದಾಗ ಅದರಲ್ಲಿ ಪ್ರಶಂಸೆ, ಸ್ತುತಿ, ಸ್ತೋತ್ರಗಳೆಲ್ಲವೂ ಸ್ವಾಭಾವಿಕವಾಗಿಯೇ ಸೇರಿಕೊಳ್ಳುವುದರ ಜೊತೆಗೆ ಅಲ್ಲಾಹ್ ನಿಗೆ ಮಾತ್ರ ಬಳಸುವಂತಾಗುತ್ತದೆ. ಆದ್ದರಿಂದಲೇ ಆಂಗ್ಲಕ್ಕೆ ಅದನ್ನು ಭಾಷಾಂತರಿಸಿರುವವರು ಕೇವಲ praise ಎಂದು ಬಳಸುವ ಬದಲು all praise ಎಂದು ಬಳಸಿರುವುದನ್ನು ನಾವು ಕಾಣುತ್ತೇವೆ. ಆ ಪದಗಳನ್ನು ‘ಅಲ್-ಹಮ್ದ್’ ನ ಪರ್ಯಾಯ ಪದಗಳೆಂದು ಪರಿಗಣಿಸದೆ ಅದರ ನೇರ ಅರ್ಥವೆಂದು ಪರಿಗಣಿಸಿದುದರಿಂದ bracket ಗಳನ್ನು ಇಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸಲಾಗಿಲ್ಲ. ನಿಮ್ಮ ಪ್ರತಿಕ್ರಿಯೆ ಶ್ಲಾಘನೀಯ; ಅನಿಸಿಕೆಗಳನ್ನು ನಮ್ಮ ಗಮನಕ್ಕೆ ತರುತ್ತಲಿರಿ ಎಂದು ವಿನಂತಿ.

      Liked by 1 person

  2. ಅಸ್ಸ‌ಲಮ್ ಅಲೈಕುಮ್ ವರಅಹ್ಮ‌ತುಲ್ಲ್ಹ‌ ಹಿ ವ‌ ಬ‌ರ‌ಕ‌ತು.ಮಾಷಾ ಅಲ್ಲಾಹ್ ಇಲ್ಲಿ ಎಲ್ಲ‌ ಬಾವಾರ್ಥ‌ಗ‌ಳು ಸ‌ರಿಯಾದ‌ಮ‌ನ‌ವ‌ರಿಕೆ ಕೊಡುತ್ತಿದೆ

    Liked by 1 person

ನಿಮ್ಮ ಟಿಪ್ಪಣಿ ಬರೆಯಿರಿ