ಅಲ್-ಕಾರಿ’ಅಃ

101alqaariah

ಅಲ್ಲಾಹ್ ನ ನಾಮದೊಂದಿಗೆ (ಪ್ರಾರಂಭಿಸುವೆ); ಅವನು ಅಪಾರ ದಯೆ ತೋರುವವನು, ಅವನ ಕಾರುಣ್ಯವು ಚಿರಂತನ!

ಅದೊಂದು ಭಾರೀ ಆಘಾತಕಾರಿ ಅಪ್ಪಳಿಕೆ! ಭಾರೀ ಆಘಾತಕಾರಿಯಾದ ಆ ಅಪ್ಪಳಿಕೆಯು ಏನಿರಬಹುದು!? ಆ ಭಯಂಕರವಾದ (ಅನಾಹುತಕಾರಿ) ಆಘಾತವು ಏನೆಂದು ನಿಮಗೇನು ಗೊತ್ತು!? ಆ ದಿನ ಮನುಷ್ಯರು ದಿಕ್ಕಾಪಾಲಾಗಿ ಚದುರಿಬಿಟ್ಟ ಪತಂಗಗಳಂತಾಗುವರು; ಬೃಹತ್ ಪರ್ವತಗಳು ಹಿಂಜಿ ಹದಗೊಳಿಸಿದ ಉಣ್ಣೆಯಂತೆ (ಹಾರಾಡುವುವು)! ಆಗ ಯಾರ (ಸತ್ಕರ್ಮಗಳ) ತಕ್ಕಡಿಯು ಭಾರವಾಗಿ ತೂಗುವುದೋ ಅವನು (ಸ್ವರ್ಗೋದ್ಯಾನದಲ್ಲಿ) ಐಶಾರಾಮದಿಂದ ಕೂಡಿದ ಸಂತೃಪ್ತ ಬದುಕು ಪಡೆಯುವನು. ಇನ್ನು, ಯಾರ (ಸತ್ಕರ್ಮಗಳ) ತಕ್ಕಡಿಯು ಹಗುರವಾಗಿ ಬಿಡುವುದೋ (ನರಕದಲ್ಲಿನ) ತಳ ರಹಿತ ಕೂಪವು ಅವನ ಅಂತಿಮ ತಾಣವಾಗಿ ಬಿಡುವುದು. ಅದೇನೆಂದು ನೀವು ಬಲ್ಲಿರೇನು? ಧಗಧಗಿಸಿ ಉರಿಯುವ (ನರಕದ) ಬೆಂಕಿಯದು! [1-11]

1 thoughts on “ಅಲ್-ಕಾರಿ’ಅಃ

ನಿಮ್ಮ ಟಿಪ್ಪಣಿ ಬರೆಯಿರಿ